Saturday, March 15, 2008

ಸ್ಕಂದಗಿರಿ

ನಾನು ಮತ್ತು ನನ್ನ ಗೆಳೆಯ ಪ್ರಸಾದ್ ಸ್ಕಂದ ಗಿರಿಗೆ ಹೋಗೋಕ್ಕೆ ಪ್ಲಾನ್ ಮಾಡಿ ಬೆಂಗಳೂರನ್ನು ೧೨:೦೦ ಗಂಟೆಗೆ ಬಿಟ್ಟೆವು. ಯೆಲಹಂಕ ಬಿಟ್ಟ ಮೇಲೆ ನಾವು ದ್ವಿಚಕ್ರ ವಾಹನದ ಕಸ್ಟ ಅರಿತೆವು. ಯಾಕಂದ್ರೆ ಬೆಳಗ್ಗೆ ಚಳಿ ಶುರು ಆಗಿತ್ತು.ಕಸ್ಟ ಪಟ್ಟು, ದಾರಿಯಲ್ಲಿ ಸಿಗೋ ಚಹಾ ಕುದಿಧು ಚಿಕ್ಕಬಳ್ಲಪುರ ತಲುಪಿದೆವು. ಅಲ್ಲಿಂದ ಸ್ಕಂದ ಗಿರಿಗೆ ಹೋಗೋ ಮಾರ್ಗ ಗೊತ್ತಗಧೆ ಕಸ್ಟ ಪಟ್ಟೆವು ಯಾಕಂದ್ರೆ ನಾವು ಚಿಕ್ಕಬಲ್ಲಪುರ ತಲುಪಿದ್ದ ವೇಳೆ ಬೆಳಗ್ಗೆ ೧:೩೦ ನಿಮಿಷ. ನಮಗೆ ದಾರಿಯಲ್ಲಿ ಕೆಲವರು ಸಿಕ್ಕರೂ ಅವರು ವಿಳಾಸ ಹೇಳೋ ಸ್ಥಿತಿಯಲ್ಲಿ ಇರಲಿಲ್ಲ.ಯಾಕಂದ್ರೆ ಅವರು ಸುರಾಪನ ಮಾಡಿ ದೇವಲೋಕದಲ್ಲಿ ಇದ್ದರು. ಕಷ್ಟಪಟ್ಟು, ನಾಯಿಗಳನ್ನು ಹೆದರಿಸಿ ಅದರಿಂದ ತಪ್ಪಿಸಿಕೊಂಡು ಸ್ಕಂದಗಿರಿ ತಪ್ಪಲು ತಲುಪಿದೆವು. ಅಲ್ಲಿ ನಮ್ಮ ಗಾಡಿ ಪಾರ್ಕಿಂಗ್ ಶುಲ್ಕ ಕೊಟ್ಟು , ಮಾರ್ಗದರ್ಷಕರನ್ನು ಗೊತ್ತು ಮಾಡಿಕೊಂಡು ಸ್ಕಂದಗಿರಿ ಹತ್ತಲು ಶುರು ಮಾಡಿದೆವು.ಹುಣ್ಣಿಮೆಯ ಚಂದ್ರನ ಬೆಳಕು, ಜೊತೆಗೆ ತಂಗಾಳಿ, ನಮ್ಮ ಆಯಾಸ ನೀಗಿಸಿತ್ತು.ಇಲ್ಲದಿದ್ದರೆ ನನ್ನ ಗೆಳೆಯ ಪ್ರಸಾದನ ಏಕಾದಶಿ ಉಪವಾಸ ಕಸ್ಟ ಆಗುತ್ತಿತ್ತು. ಹತ್ತುವ ಮಾರ್ಗದಲ್ಲಿ ಫೋಟೋ ಕ್ಲಿಕ್ಕಿಸಿ ಹಾಗೆ ಮುಂದು ವರೆದೆವು. ದಾರಿಯಲ್ಲಿ ಸಿಕ್ಕ ಎಸ್ತೋ ಅಪರಿಚಿತರು ಕ್ಷಣಾರ್ಧದಲ್ಲಿ ಪರಿಚಿತರಾದರು. ಅವರೊಂದಿಗೆ ಮಾತಾಡುತ್ತ ಬೆಟ್ಟ ಹತ್ತಿ ಅಲ್ಲಿ ಸಿಕ್ಕ ಬಿಸ್ಕಿಟ್ ಮತ್ತು ಚಹಾ ಕುಡಿದೆ. ಪ್ರಸಾದ್ ಮಾತ್ರ ಏಕಾದಶಿ ಬಿಡಲಿಲ್ಲ.ಮೊದಲು ಬೆಟ್ಟದ ಮೇಲಿರುವ ಗಣೇಶನಿಗೆ ನಮಸ್ಕರಿಸಿದೆವು. ಅಲ್ಲೇ ಸ್ವಲ್ಪ ಸಮಯ ವಿಶ್ರಾಂತಿ ಪದೆಧೆವು. ಅದು ಸುಮಾರು ೬:೦೦ ಸಮಯ.ಸೂರ್ಯೋದಯ. ವರ್ಣಿಸಲು ಸಾಧ್ಯವಾಗದ ನೋಟ.ನಾವು ಮೋಡದ ಮೇಲೆ ನಿಂತ ಅನುಭವ. ಮೋಡದ ಒಳಗಿಂದ ಸೂರ್ಯ ಎದ್ದು ಬಂದ ಹಾಗೆ.ನೋಡ ನೋಡುತ್ತಿದ್ದಂತೆಯೇ ನಾವು ಭೂಮಿಯಮೇಲೆ ಇದೀವೋ ಅಥವಾ ದೇವಲೋಕದಲ್ಲಿ ಇದ್ದೆವೋ ಎಂಬ ಅನುಭವ. ಒಂದು ರೀತಿ ಮೋಡಸಮುದ್ರದ ಹಾಗೆ.ಎಸ್ಟು ನೋಡಿಧರೂ ಮನ ತನಿಯಲಿಲ್ಲ. ಕೂಗಿದೆವು, ಕಿರುಚಿದೆವು, ನಿಷ್ಯಬ್ದವಾದೆವು. ಪ್ರಕೃತಿಯ ಸುಂದರ ಚಿತ್ತಾರಕ್ಕೆ ಮನಸೋತು ಶರಣಾದೆವು.೮:೩೦ ನಿಮಿಷದ ವರೆಗೆ ಅಲ್ಲೇ ಪ್ರಕೃತಿಯ ಸುಂದರ ಕಾವ್ಯವನ್ನು ಸವಿದೆವು. ಅಲ್ಲಿಂದ ೮:೩೦ ಕ್ಕೆ ಹೊರತು, ಮತ್ತೆ ದಿನನಿತ್ಯದ ಜನ್ಜಟಕ್ಕೆ ಧುಮುಕಿದೆವು. ಅಸ್ಟರೊಳಗೆ ನಮಗೆ ಜಗತ್ತನ್ನೇ ಗೆದ್ದ ಸಂಬ್ರಮ ಸಿಕ್ಕಿತ್ತು.ಕೊನೆಗೂ ಛಲ ಬಿಡದ ತ್ರಿವಿಕ್ರಮನಂತೆ ಪ್ರಸಾದ ಏಕಾದಶಿ ಉಪವಾಸ ಪೂರ್ತಿ ಮಾಡಿದ.ದ್ವಾದಶಿ ದಿನ ಎರಡೂ ದಿನದ ಊಟ ಮಾಡಿ ಮುಗಿಸಿದ

Monday, January 21, 2008

Skanda giri, also we can call it as valley of clouds.